Saturday, September 19, 2009

ಸಂಗಮ

ಮಮ ಮಮ ಮಮ ಮಮ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮ... ಮಮ...
ಕೊಡು ಕೊಡು ವರವನು ಭಗವಂತ
ಇವನಿಗೆ ಆಗಲಿ ನಾ ಸ್ವಂತ
ಮಮ ... ಮಮ ..
ಹಣೆಯಲ್ಲಿ ಬರೆದರು ಏನೇ ಬದಲಾಯಿಸಿ ಬಿಡು ನೀನೆ
ನನಗಾಗಿ ಜನಿಸಿದ ಹುಡುಗ ಇವನೇ ತಾನೇ

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮ.. ಮಮ ...

ನಾನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ
ಮಮ ..
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ
ಮಮ..
ಇವನೊಪ್ಪಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಒಂದು ನಗೆ
ನನಗೆ ನನಗೆ ನನಗೆ ನನಗೆ ನನಗೇ....

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮ.. ಮಮ..

ತಾರೆಗಳ ತೋರಿಸುವ ಬಿರು ಬಿರು ಬಿಸಿಲಲು ಹೇಗೋ ಇವ
ಮಮ..
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ
ಮಮ..
ಇವನ ಎದೆ ಗೂಡಲಿ ಜಾಗ ಕೊಡು ನನಗೀ ಜಗ ಬೇಡ ಬಿಡು
ನಮ್ಮಿಬ್ಬರ ಸಂಗಮ ಮಾಡಿ ಬಿಡು
ಇದುವೇ ಬಯಕೆ ನಿನಗೆ ಹೊರುವೆ ಹರಕೆ ...

ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮ.. ಮಮ...

Sunday, August 30, 2009

ಐಶ್ವರ್ಯ

ತಳಮಳವಿದು ಏನಿದು ಕಳವಳವಿದು ನಿಲ್ಲದು
ಇದ ತಿಳಿಸಲು ಆಗದು ಪ್ರೇಮಾನಾ
ಹದಿಹರೆಯದ ವಯಸಿದು ಎಲೆಮನಸಿನ ಕನಸಿದು
ಬಲೆ ಹೆಣೆದರು ಯಾರದು ನೀನೇನಾ
ಎಲ್ಲೆಲ್ಲು ನೀನೆ ನೀನೆ ನನ್ನಲ್ಲೂ ನೀನೆ ತಾನೇ
ಅಣು ಅಣುವಲು ನಿಂದೆ ಉತ್ಸವಾ
ಮನ್ಮಥಾ ನೀನೇನಾ ನೀನೇನಾ ನೀನೇನಾ
ಮನ್ಮಥ ನೀನೇನಾ ನೀನೇನಾ....

ನಿನ್ನ ಒಂದು ಸ್ಪರ್ಶದಿಂದ ನೀ ತಂದ ಹರ್ಷದಿಂದ ಹದಿನಾರರ ಬೇಲಿ ದಾಟಿದೆ
ನಿನ್ನ ಒಂದು ನೋಟದಿಂದ ಕಣ್ಣಂಚಿನ ಸನ್ನೆಯಿಂದ ಮೈ ಮನಸು ತೇಲಿ ಹೋಗಿದೆ
ಮುಂಜಾನೆ ಮಂಜಿಗಿಂತ ತಂಪು ನಾನು
ರವಿಯಂತೆ ನನ್ನ ಮುಟ್ಟಿಬಿಟ್ಟೆ ನೀನು
ಇನ್ನೆಂದು ನೀ ತಂದೆ ಉಲ್ಲಾಸ ಉತ್ಸಾಹ
ಎಲ್ಲಿಂದ ಬಂದೆ ನೀನು ಹೇಳು ಮನ್ಮಥ
ಮನ್ಮಥ ನೀನೇನಾ ನೀನೇನಾ ನೀನೇನಾ
ಮನ್ಮಥ ನೀನೇನಾ ನೀನೇನಾ....

Life is full of love
love is what we need
what you're looking for?
Is it love/6/

ಮನಸೊಂದು ನೀಲಿ ಬಾನು ನೀನಿರದೆ ಖಾಲಿ ನಾನು
ಸೂರ್ಯನೇ ನೀನೆ ಅಲ್ಲವೆ
ಮನದಾಸೆ ಹೇಳುವಾಸೆ ನಿನ್ನೊಳಗೆ ಬಾಳುವಾಸೆ
ಮೊದಮೊದಲ ಪ್ರೀತಿ ಅಲ್ಲವೆ
ಮುಸ್ಸಂಜೆ ಬಾನು ಕೆಂಪು ರಂಗು ನಾನು
ಬಾನಾಡಿಯಾಗಿ ಬಂದು ಸೇರು ನೀನು
ನಿನ್ನಿಂದ ಸಂತೋಷ ಸಲ್ಲಾಪ ಸಮ್ಮೇಳ
ಎಲ್ಲಿಂದ ಬಂದೆ ನೀನು ಹೇಳು ಮನ್ಮಥ
ಮನ್ಮಥ ನೀನೇನಾ ನೀನೇನಾ ನೀನೇನಾ
ಮನ್ಮಥ ನೀನೇನಾ ನೀನೇನಾ...

ತಳಮಳವಿದು ಏನಿದು /2/
ಕಳವಳವಿದು ನಿಲ್ಲದು /2/
ಇದ ತಿಳಿಸಲು ಆಗದು ಪ್ರೇಮಾನಾ
ಹದಿಹರೆಯದ ವಯಸಿದು ಎಲೆಮನಸಿನ ಕನಸಿದು
ಬಲೆ ಹೆಣೆದರು ಯಾರದು ನೀನೇನಾ
ಎಲ್ಲೆಲ್ಲು ನೀನೇ ನೀನೇ ನನ್ನಲ್ಲೂ ನೀನೇ ತಾನೇ
ಅಣು ಅಣುವಲು ನಿಂದೆ ಉತ್ಸವಾ
ಮನ್ಮಥ ..
ಮನ್ಮಥ ನೀನೇನಾ ನೀನೇನಾ ನೀನೇನಾ
ಮನ್ಮಥ ನೀನೇನಾ ನೀನೇನಾ .....

ತಾಜ್ ಮಹಲ್

ಅವಳಂದ್ರೆ ನಂಗೆ ತುಂಬಾ ಇಷ್ಟ
ಅವಳಿಗೂ ನಾನಂದ್ರೆ ಇಷ್ಟ... ಅನ್ಸತ್ತೆ ..

ಖುಷಿಯಾಗಿದೆ ಏಕೋ ನಿನ್ನಿಂದಲೇ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ... ನಾನು ತುಸು ನಾಚುವೆ
ರೆಪ್ಪೆಯಾ ಮುಚ್ಚದೇ ನಿನ್ನನೆ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ /2/
ತಣ್ಣನೆ ಗಾಳೀಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ /2/
ಆದರು ಮರೆತೇ ಇಲ್ಲ ನಾ ನಿನ್ನ
ಆ ಚಿಲಿಪಿಲಿ ಕಲರವ ನಿನ್ನದಲ್ಲವೆ
ಆ ಹುಣ್ಣಿಮೆ ಬೆಳಕು ನೀನಲ್ಲವೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯಾ ಮುಚ್ಚದೇ ನಿನ್ನನೆ ನೋಡುವೆ

ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೇ /2/
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ ನಿನ್ನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯಾ ಮುಚ್ಚದೇ ನಿನ್ನನೇ ನೋಡುವೆ

ಅವನಂದ್ರೆ ನಂಗೆ ತುಂಬಾ ಇಷ್ಟ
ಅವನಿಗೂ ನಾನಂದ್ರೆ ಇಷ್ಟ ... ಅನ್ಸತ್ತೆ ...

Saturday, August 29, 2009

ಪಯಣ

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ /2/

ನಿಂತಲಿ ನಾ ನಿಲಲಾರೆ ಎಲ್ಲರು ಹಿಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಹೇ...
ಪ್ರೀತಿ ನನ್ನ ಬಲೆಯೊಳಗೋ
ನಾನೇ ಪ್ರೀತಿ ಬಲೆಯೊಳಗೋ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜನು ಪ್ರೀತಿಗೊಡಯ ನಾನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಕಾಣದೆ /2/

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು

hey hey i love you
say say that you love me
love me love me love me da
love me love me love me now

ನಾನು ನಿನ್ನ ಕಣ್ಣೊಳಗೆ ಮಾಯೆ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು
ಹೇ ಏ....
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ
ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ /2/

ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ ತುದಿಗಾಲಲಿನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲಾ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ /2/

ಐಶ್ವರ್ಯ

ಹುಡುಗಿ ಹುಡುಗಿ ನಿನ್ನ ಕಂಡಾಗ
ನನ್ನೇ ಮರೆತೇ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ
ನಾನೇ ಇಲ್ಲ ನನಗೀಗ
ನೀನು ಬಳುಕಿ ನಡೆಯುವಾಗ ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ
ಪ್ರೀತ್ಸೆ...

ತುಟಿಯಲ್ಲಿ ಇ ಸ್ಮೈಲು ಕಂಡಾ ಕೂಡಲೇ ಎದೆಯಲ್ಲಿ ಪ್ರೀತಿಯ ಚಿಲುಮೆ ಚಿಮ್ಮಿತು
ಕಣ್ಣಲ್ಲಿ ಸಿಹಿ ಲುಕ್ಕು ಕೊಟ್ಟ ಕೂಡಲೇ ಮನಸೆಲ್ಲೊ ಗರಿ ಬಿಚ್ಚಿ ಹಾರಿ ಹೋಯಿತು
ನೀ ನಡೆಯೋ ದಾರಿ ಎಲ್ಲ ಹದಿನೇಳು ಚೈತ್ರವಾಯ್ತು
ನೀ ಹಾಡೋ ಹಾಡಿನಿಂದ ಕವಿಗಳಿಗೆ ಉಸಿರು ಬಂತು
ನಿನ್ನ ಮೌನ ನೋಡಿ ತಾನೇ ಗಾಳಿ ಹಾಡ ಹಾಡಿತು
ನಿನ್ನ ಮಾತು ಕೇಳಿದೊಡನೆ ಕೋಗಿಲೆ ಕೂಹೂ ಕಲಿಯಿತು
ಪ್ರೀತೀನ ಪ್ರೀತಿಯಿಂದ ಪ್ರೀತಿ ಮಾಡುವೆ
ಪ್ರೀತ್ಸೆ.........

ಹುಡುಗಿ ಹುಡುಗಿ ನಿನ್ನ ಕಂಡಾಗ ನನ್ನೇ ಮರೆತೇ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ ನಾನೇ ಇಲ್ಲ ನನಗೀಗ

ಗಾಳೀಲಿ ನಿನ್ನ ಹೆಸರ ಕರೆದ ಕೂಡಲೇ ಹೂವುಗಳು ಮೈನೆರೆದ ಕತೆಯು ಹುಟ್ಟಿತೆ
ಮಳೆಯೊಳಗೆ ನಿನ್ನ ಹಾಡು ನೆನೆದ ಕೂಡಲೇ ಚಿಪ್ಪೊಳಗೆ ಮುತ್ತುಗಳ ಹೊಳಪು ಹುಟ್ಟಿತೆ
ನೀ ಸೋಕೋ ನೆಲದಲೆಲ್ಲ ಚಿಗುರುಗಳ ಹಬ್ಬವಂತೆ
ನೀ ತಾಕೋ ಕಡೆಯಲೆಲ್ಲ ಇಬ್ಬನಿಯ ದಿಬ್ಬವಂತೆ
ನಿನ್ನ ಮೊನಾಲೀಸಾ ನಗೆಯ ನಾ ಕದಿಯೋ ಸಲುವಾಗಿ
ಪ್ರೀತಿ ತುಂಬಿಕೊಂಡ ಎದೆಯ ನಾ ಸೇರೋ ಕ್ಷಣಕಾಗಿ
ಮನಸಾರೆ ಸೋತು ಬಂದೆ ಒಮ್ಮೆ ಒಪ್ಪಿಕೊ
ಪ್ರೀತ್ಸೆ...

ಹುಡುಗಿ ಹುಡುಗಿ ನಿನ್ನ ಕಂಡಾಗ ನನ್ನೇ ಮರೆತೇ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ ನಾನೇ ಇಲ್ಲ ನನಗೀಗ
ನೀನು ಬಳುಕಿ ನಡೆಯುವಾಗ ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ
ಪ್ರೀತ್ಸೆ ....

Wednesday, August 26, 2009

ವಂಶಿ



ಗಂಡು :ಅಮಲು ಅಮಲು ಅಮಲು ಗೆಳತಿ ನೀನು ಸಿಗಲು
ಮರುಳೀಗ ಮಿತಿ ಮೀರಿ ನನಗಂತೂ ದಿಗಿಲು
ಹೆಣ್ಣು : ಅಮಲು ಅಮಲು ಅಮಲು ಗೆಳಯ ನೀನು ನಗಲು
ನನಗಂತೂ ಯಾರಿಲ್ಲ ನಿನಗಿಂತ ಮಿಗಿಲು
ಗಂ: ಅಮಲು ಅಮಲು ಅಮಲು
ಹೆ: ಗೆಳಯ ನೀನು ನಗಲು

ಗಂ: ಬಾರೆ ಬಳಿ ಬಾರೆ ಏಕೆ ಕಾಲ ಹರಣ
ಹೆ: ಎಲ್ಲ ಪಿಸುಮಾತು ಮುತ್ತಾಗೋ ಲಕ್ಷಣ
ಗಂ: ತಿಳಿದಿದೆ ತೆರೆದಿದೆ ಕನಸಿನ ಕದ
ಹೆ:ಅರಿಯದೇ ಅರಳಿದೆ ಹಸಿ ಬಿಸಿ ಪದ
ಗಂ: ಹರೆಯ ನೋಡಿದೇ ಮಾತಾಡಲು
ಹೆ: ಅಮಲು ಅಮಲು ಅಮಲು
ಗಂ: ಗೆಳತಿ ನೀನು ಸಿಗಲು

ಗಂ: ನಿನ್ನ ಉಸಿರಿಂದ ನೇರ ಜೀವ ಗಾನ
ಹೆ: ಜೀವ ಹಸಿರಾಗಿ ಬದುಕೀಗ ಶ್ರಾವಣ
ಗಂ:ಪರದೆಯ ಸರಿಸಿದೆ ಪರವಶ ಮನ
ಹೆ: ಹೃದಯವೆ ಅರಿತಿದೆ ಹೃದಯದ ಗುಣ
ಗಂ:ಸಮಯ ನಿಂತಿದೆ ಹಾರೈಸಲು

ಗಂ:ಅಮಲು ಅಮಲು ಅಮಲು
ಹೆ: ಗೆಳಯ ನೀನು ನಗಲು
ಗಂ:ಮರುಳೀಗ ಮಿತಿಮೀರಿ ನನಗಂತೂ ದಿಗಿಲು
ಹೆ:ಅಮಲು ಅಮಲು ಅಮಲು
ಗೆಳಯ ನೀನು ನಗಲು
ಗಂ :ಅಮಲು ಅಮಲು ಅಮಲು
ಗೆಳತಿ ನೀನು ಸಿಗಲು
ಗಂ,ಹೆ: ಅಮಲು ಅಮಲು ಅಮಲು
ಹೆ:ಅಮಲು ಅಮಲು ಅಮಲು

Saturday, August 22, 2009

ಗೆಳೆಯ

ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ
ಓ ಓ ...
ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ

ಈ ನೋವಿಗೆ ಕಿಡಿ ಸೋಕಿಸಿ ಮಜಾ ನೋಡಿದೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವು ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ ಈ ಜೀವ ಕಸಿಯಾಗಿದೆ

ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ

ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ
ಅದನೋದುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ .....
ಈ ಗಾಯ ಹಸಿಯಾಗಿದೆ ....

ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ..
ಓ ಓ ..
ಈ ಮೌನ ಬಿಸಿಯಾಗಿದೆ

ಈ ಸಂಜೆ ಯಾಕಾಗಿದೇ ನೀನಿಲ್ಲದೆ ಈ ಸಂಜೆ ಯಾಕಾಗಿದೆ...


ಮುಂಗಾರು ಮಳೆ

ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ತರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ ಇರಲಿ ಅಂತರ

ಇವನು ಗೆಳಯನಲ್ಲ ಗೆಳತಿ ನಾನು ಮೊದಲೇ ಅಲ್ಲ

ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯ ಭೀಕರ ಸುಳಿಯೋ
ಅರಿಯದಂತ ಹೊಸ ಕಂಪನವೋ ಯಾಕೋ ಕಾಣೆನು
ಅರಿತೋ ಮರಿತೋ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೇ ಉಳಿಸು ನನ್ನನು

ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ

ಹೋ ...

ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೇ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲೂ ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯಾ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ

ಇವನು ಇನಿಯನಲ್ಲ ತುಂಬ ಸನಿಹ ಬಂದಿಹನಲ್ಲ

Thursday, August 20, 2009

ಗಾಳಿಪಟ

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ ನನಗೆ ಉಳಿಗಾಲ..
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ ...

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೆ ಮರಿವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು..

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೆಲ್ಲಿ ನನಗೆ ಉಳಿಗಾಲ

Wednesday, August 19, 2009

ಜೊತೆ ಜೊತೆಯಲಿ

ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾನೆ
ಪ್ರೀತೀಲಿ ಗೆಲ್ತಾನೆ ..
ನಕರಾ ನಕರಾ ಶ್ಯಾನೆ ನಕರಾ
ನಂಗೂ ಇಷ್ಟಾನೆ ...
ನಾನು ಸೀರೆ ನೆರಿಗೆ ಹಾಕುವ ಘಳಿಗೆ ಬರ್ತಾನೆ ಬಳಿಗೆ
ಆಮೇಲೆ ಅಮ್ಮಮ್ಮಮಾ..
ಯಾವ ಸೀಮೆ ಹುಡುಗಾ
ತುಂಟಾಟವಾಡದೆ ನಿದ್ದೇನೆ ಬಾರದೇ
ಅಬ್ಬಬ್ಬಬ್ಬಬ್ಬಬ್ಬಬಾ..
ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾನೆ
ಪ್ರೀತೀಲಿ ಗೆಲ್ತಾನೆ ....

ಅಂಗಾಲಿಗೂ ಅಂಗಯ್ಯಿಗೂ ಗೋರಂಟಿಯಾ ಹಾಕುವಾ
ಯಾಮಾರಿಸಿ ಕೈ ಸೋಕಿಸಿ ಕಳ್ಳಾಟವಾ ಆಡು ವಾ
ನಿನ್ನ ಕಣ್ಣಲಿ ಧೂಳು ಇದೆ ಎಂದು ನೆಪ ಹೇಳುತಾ
ನನ್ನ ಕಣ್ಣಲಿ ಕಣ್ಣಿಟ್ಟನು ತುಟಿ ಅಂಚನು ತಾಕುತಾ
ನಾನು ನೋವು ಎಂದರೆ ಕಣ್ಣೀರು ಹಾಕುವ
ನೋವೆಲ್ಲ ನೂಕುವಾ ಧೈರ್ಯಾನ ಹೇಳುವಾ
ಮಾತು ಮಾತು ಸರಸ ಒಂದ್ಚೂರು ವಿರಸ
ಇಲ್ಲದ ಅರಸ ಆಳ್ತಾನೆ ಮನಸಾ

ಮುಂಜಾನೆಯ ಮೊಗ್ಗೆಲ್ಲವಾ ಸೂರ್ಯಾನೆ ಹೂ ಮಾಡುವಾ
ಈ ಹುಡುಗಿಯ ಹೆಣ್ಣಾಗಿಸೋ ಜಾದುಗಾರನಿವಾ
ಹೋ..........

ಮುಸ್ಸಂಜೆಯ ದೀಪ ಇವ ಮನೆ ಮನ ಬೆಳಗುವಾ
ಸದ್ದಿಲ್ಲದಾ ಗುಡುಗು ಇವ ನನ್ನೊಳಗೆ ಮಳೆಯಾಗುವಾ
ಪ್ರೀತಿಯೊಂದೆ ನಂಬಿಕೆ ಹೃದಯಾನೆ ಕಾಣಿಕೆ
ಅನ್ನೋದು ವಾಡಿಕೆ ಅದಕ್ಕಿವನೆ ಹೋಲಿಕೆ
ಏಳು ಏಳು ಜನುಮ ಇವನಿಂದ ನೀಯಮ್ಮ
ಆಗುತ್ತಾ ಬಾಳಮ್ಮ ಅಂದೋನು ಆ ಬ್ರಹ್ಮ...

ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾನೆ
ಪ್ರೀತೀಲಿ ಗೆಲ್ತಾನೆ .........

ಸವಾರಿ


ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು ... ಒಲವೂ..
ಸಿಹಿ ಸವಿ ಕವನಾ...
ಬರಲಿ ಮಳೆಯಾಗಿ
ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ.. ಹಲವೂ...
ಹಸಿ ಖುಷಿ ಕವನಾ...
ಕನಸ ನೀ ನನಸಾಗಿಸಿ.. ಕಲರವ ನೀ ಪಸರಿಸಿ
ನೀ ಇನಿಯ ನೀ ಪ್ರೀತಿಗೆ ಸಾರಥಿ..

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು .. ಒಲವೂ.......
ಸಿಹಿ ಸವಿ ಕವನಾ..

ರಿಂಗಣ ಹೊಸತನ ತರುವ ಈ ನರ್ತನ
ತಿಂಗಳ ಬೆಳಕನ ಕಂಡೆ ಈ ಸಂಜೆ ನಾ
ಧರೆಗಿಳಿದ ಕಿನ್ನರ ನೀ
ವಿಸ್ಮಯದಾ ಕಿರಣವೇ ನೀ
ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
ನೀ ಇನಿಯ ನೀ ಪ್ರೀತಿಗೆ ಸಾರಥಿ...

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವೂ ..
ಸಿಹಿ ಸವಿ ಕವನಾ...

ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ
ಆಗಸಕೆ ರಂಗೆರಚಿ ಬಣ್ಣದಲಿ ಭಾವ ಜಿನುಕಿ
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯ ನೀ ಪ್ರೀತಿಗೆ ಸಾರಥಿ ...

ಮರಳಿ ಮರೆಯಾಗಿ
ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು.. ಒಲವೂ..
ಸಿಹಿ ಸವಿ ಕವನಾ....

Tuesday, August 18, 2009

ಬಿರುಗಾಳಿ

ಮಧುರಾ ಪಿಸುಮಾತಿಗೆ..
ಅದರಾ ತುಸು ಪ್ರೀತಿಗೆ...
ಇರುವಲ್ಲಿಯೇ ಇರಲಾರದೆ,
ಬರುವಲ್ಲಿಯು ಬರಲಾರದೆ...
ಸೋತೆ ನಾನು ನಿನ್ನಾ ಪ್ರೀತಿಗೆ...
ಓ ಓ ಓ ಓ ಓ ಓ ಓ...
ಚೂರಾದೆ ಒಂದೇ ಭೇಟಿಗೆ... 2

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ...
ದಾರಿಯನೆ ಬರೇ ನೋಡುವೆನು ನೀ ಕಾಣುವವರೆಗೆ...
ನಿನ್ನದೇ ಪರಿಮಳ... ನಿನ್ನಯಾ ನೆನಪಿದೆ...
ಏನಿದು ಕಾತರ...
ಬಾರಿ ಬಾರಿ ನಿನ್ನ ಭೇಟಿಗೆ...
ಸೋತೆ ನಾನು ನಿನ್ನಾ ಪ್ರೀತಿಗೆ...

ಮಧುರಾ ಪಿಸುಮಾತಿಗೆ...
ಅದರಾ ತುಸು ಪ್ರೀತಿಗೆ...

ನೋಡಿದರೆ ಮಿತಿಮೀರುತಿದೆ ಮನಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ...
ನಿನ್ನದೇ ಹೆಸರಿದೆ... ಕನಸಿನಾ ಊರಿಗೆ...
ಕುಣಿಯುತಾ ಬಂದೆನು...
ಭಿನ್ನವಾದ ನಿನ್ನಾ ದಾರಿಗೆ...
ಓ ಓ ಓ ಓ ಓ ಓ ಓ....
ಸೋತೆ ನಾನು ನಿನ್ನಾ ಪ್ರೀತಿಗೆ...

ಮಧುರಾ ಪಿಸುಮಾತಿಗೆ...
ಅದರಾ ತುಸು ಪ್ರೀತಿಗೆ...
ಇರುವಲ್ಲಿಯೇ ಇರಲಾರದೆ, ಬರುವಲ್ಲಿಯು ಬರಲಾರದೆ...
ಸೋತೆ ನಾನು ನಿನ್ನಾ ಪ್ರೀತಿಗೆ...
ಓ ಓ ಓ ಓ ಓ ಓ ಓ...
ಚೂರಾದೆ ಒಂದೇ ಭೇಟಿಗೆ...