Wednesday, August 19, 2009

ಜೊತೆ ಜೊತೆಯಲಿ

ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾನೆ
ಪ್ರೀತೀಲಿ ಗೆಲ್ತಾನೆ ..
ನಕರಾ ನಕರಾ ಶ್ಯಾನೆ ನಕರಾ
ನಂಗೂ ಇಷ್ಟಾನೆ ...
ನಾನು ಸೀರೆ ನೆರಿಗೆ ಹಾಕುವ ಘಳಿಗೆ ಬರ್ತಾನೆ ಬಳಿಗೆ
ಆಮೇಲೆ ಅಮ್ಮಮ್ಮಮಾ..
ಯಾವ ಸೀಮೆ ಹುಡುಗಾ
ತುಂಟಾಟವಾಡದೆ ನಿದ್ದೇನೆ ಬಾರದೇ
ಅಬ್ಬಬ್ಬಬ್ಬಬ್ಬಬ್ಬಬಾ..
ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾನೆ
ಪ್ರೀತೀಲಿ ಗೆಲ್ತಾನೆ ....

ಅಂಗಾಲಿಗೂ ಅಂಗಯ್ಯಿಗೂ ಗೋರಂಟಿಯಾ ಹಾಕುವಾ
ಯಾಮಾರಿಸಿ ಕೈ ಸೋಕಿಸಿ ಕಳ್ಳಾಟವಾ ಆಡು ವಾ
ನಿನ್ನ ಕಣ್ಣಲಿ ಧೂಳು ಇದೆ ಎಂದು ನೆಪ ಹೇಳುತಾ
ನನ್ನ ಕಣ್ಣಲಿ ಕಣ್ಣಿಟ್ಟನು ತುಟಿ ಅಂಚನು ತಾಕುತಾ
ನಾನು ನೋವು ಎಂದರೆ ಕಣ್ಣೀರು ಹಾಕುವ
ನೋವೆಲ್ಲ ನೂಕುವಾ ಧೈರ್ಯಾನ ಹೇಳುವಾ
ಮಾತು ಮಾತು ಸರಸ ಒಂದ್ಚೂರು ವಿರಸ
ಇಲ್ಲದ ಅರಸ ಆಳ್ತಾನೆ ಮನಸಾ

ಮುಂಜಾನೆಯ ಮೊಗ್ಗೆಲ್ಲವಾ ಸೂರ್ಯಾನೆ ಹೂ ಮಾಡುವಾ
ಈ ಹುಡುಗಿಯ ಹೆಣ್ಣಾಗಿಸೋ ಜಾದುಗಾರನಿವಾ
ಹೋ..........

ಮುಸ್ಸಂಜೆಯ ದೀಪ ಇವ ಮನೆ ಮನ ಬೆಳಗುವಾ
ಸದ್ದಿಲ್ಲದಾ ಗುಡುಗು ಇವ ನನ್ನೊಳಗೆ ಮಳೆಯಾಗುವಾ
ಪ್ರೀತಿಯೊಂದೆ ನಂಬಿಕೆ ಹೃದಯಾನೆ ಕಾಣಿಕೆ
ಅನ್ನೋದು ವಾಡಿಕೆ ಅದಕ್ಕಿವನೆ ಹೋಲಿಕೆ
ಏಳು ಏಳು ಜನುಮ ಇವನಿಂದ ನೀಯಮ್ಮ
ಆಗುತ್ತಾ ಬಾಳಮ್ಮ ಅಂದೋನು ಆ ಬ್ರಹ್ಮ...

ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾನೆ
ಪ್ರೀತೀಲಿ ಗೆಲ್ತಾನೆ .........

No comments:

Post a Comment